ಮತಾಂತರ

ಕೊನೆಯ ಅಪ್ಡೇಟ್ Sep 14, 2022

ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದಾಗ ಹಿಂದೂ ಧರ್ಮದಿಂದ ಮತಾಂತರ:

ಮತಾಂತರ:

ನಿಮ್ಮ ಸಂಗಾತಿ ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾಗ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಕರಣ ಹೂಡುವುದು: ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾರೆ ಎಂದ ಮಾತ್ರಕ್ಕೆ ನಿಮ್ಮ ಮದುವೆ ಅಂತ್ಯಗೊಳ್ಳದು. ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರೂ ಸಹ ವಿಚ್ಛೇದನದ ಪ್ರಕರಣವು ಹಿಂದೂ ವಿವಾಹ ಕಾನೂನಿನಡಿ ಜರುಗುತ್ತದೆ. ಏಕೆಂದರೆ, ನಿಮ್ಮಿಬ್ಬರ ಮದುವೆ ಹಿಂದೂ ಕಾನೂನಿನಡಿ ನೆರವೇರಿತ್ತು.

ವಿಚ್ಛೇದನದ ಅರ್ಜಿ ಸಲ್ಲಿಸುವು ಮುನ್ನ ಪುನರ್ವಿವಾಹ:

ನ್ಯಾಯಾಲಯವು ವಿಚ್ಛೇದನದ ಅಂತಿಮ ತೀರ್ಪು ನೀಡುವ ತನಕ ನಿಮ್ಮ ಮದುವೆ ಅಸ್ತಿತ್ವದಲ್ಲಿರುತ್ತದೆ. ನಿಮ್ಮ ಸಂಗಾತಿ ಇದರ ಮುನ್ನ ಪುನರ್ವಿವಾಹವಾಗುವಂತಿಲ್ಲ. ಒಂದು ವೇಳೆ ಅವರು ಪುನರ್ವಿವಾಹವಾದರೂ ಅದು ಕಾನೂನಿನಡಿ ಅಮಾನ್ಯವಾಗಿರುತ್ತದೆ.

ಶಿಕ್ಷೆ:

ಒಂದು ವೇಳೆ ವಿಚ್ಛೇದನದ ಮುನ್ನ ನಿಮ್ಮ ಸಂಗಾತಿ ಪುನರ್ವಿವಾಹವಾದರೆ ನೀವು ಅವರನ್ನು ದ್ವಿಪತ್ನಿತ್ವ/ದ್ವಿಪತಿತ್ವದ ಅಪರಾಧದಡಿ ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡದಿಂದ ಶಿಕ್ಷಿಸಬೇಕೆಂದು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.