ನೀವು ಸಾಗರೋತ್ತರ ಭಾರತೀಯ ನಾಗರಾಯಿಕರು, ಅನಿವಾಸಿ ಭಾರತೀಯರು, ಅಥವಾ ಪರದೇಶದಲ್ಲಿ ನೆಲೆಸಿದ ವಿದೇಶಿಯರು ಆಗಿದ್ದು ಭಾರತೀಯ ಮಗುವನ್ನು ದತ್ತು ಸ್ವೀಕೃತಿ ಮಾಡಬೇಕೆಂದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:
ಹಂತ ೧: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.
ಹಂತ ೨: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.
ಹಂತ ೩: ನಿಮಗೆ ೨ ಮಕ್ಕಳನ್ನು ಸೂಚಿಸಲಾಗುತ್ತದೆ, ಹಾಗು ನೀವು ೯೬ ಗಂಟೆಗಳೊಳಗೆ ಒಂದು ಮಗುವನ್ನು ದತ್ತು ಪಡೆಯಲು ಮೀಸಲಿಡಬಹುದು. ಹೀಗೆ ಮಾಡಿದಾಗ ಇನ್ನೊಂದು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಹೀಗೆ ಮಾಡಲು ವಿಫಲವಾದಾಗ ಇರಡೂ ಮಕ್ಕಳ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಮಗುವನ್ನು ಮೀಸಲಿಟ್ಟ ಮೇಲೆ, ಮಗುವಿನ ಅಧ್ಯಯನ ವರದಿ, ಮತ್ತು ವೈದ್ಯಕೀಯ ತಪಾಸಣಾ ವರದಿಗಳಿಗೆ ಸಹಿ ಹಾಕಿ, ಮೀಸಲಿಟ್ಟು ೩೦ ದಿನಗಳ ಒಳಗೆ ಮಗುವನ್ನು ಒಪ್ಪಿಕೊಳ್ಳಬೇಕು. ನೀವು ಹೀಗೆ ಮಾಡಲು ವಿಫಲವಾದಲ್ಲಿ ನಿಮ್ಮ ಹೆಸರನ್ನು ವರಿಷ್ಠತ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ, ಮತ್ತು ಮಗುವಿನ ಹೆಸರು ಹಿಂತೆಗೆದುಕೊಳ್ಳಲಾಗುತ್ತದೆ. ನೀವು ಮಗುವನ್ನು ಖುದ್ದಾಗಿ ಭೇಟಿ ನೀಡಿ, ಅದರ ವೈದ್ಯಕೀಯ ತಪಾಸಣಾ ವರದಿಯನ್ನು ವೈದ್ಯರಿಂದ ಪುನರಾವಲೋಕನ ಮಾಡಿಸಬಹುದು.
ಹಂತ ೪: ಮಗುವನ್ನು ದತ್ತಕ್ಕೆ ಕೊಡಲು ಯಾವುದೇ ಆಕ್ಷೇಪಣೆ ಇಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳಿಂದ ಸಿಕ್ಕ ಪ್ರಮಾಣಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಲಾಗುತ್ತದೆ.
ಹಂತ ೫: ನಿಮಗೆ ಆಕ್ಷೇಪಣೆ ಇಲ್ಲವೆಂಬುದರ ಪ್ರಮಾಣಪತ್ರ ಸಿಕ್ಕ ಮೇಲೆ, ಮತ್ತು ನ್ಯಾಯಾಲಯದಿಂದ ದತ್ತು ಸ್ವೀಕೃತಿಯ ಆದೇಶ ಸಿಗುವ ತನಕ, ದತ್ತು-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕಾಗುತ್ತದೆ. ಮಗು ನಿಮ್ಮ ಜೊತೆ ಶಾಶ್ವತವಾಗಿ ಇರಬಹುದು, ಮತ್ತು ಅದು ನಿಮ್ಮ ಸಂಪೂರ್ಣ ಜವಾಬ್ದಾರಿ ಎಂದು ಕೆಳಗಿನ ಪ್ರಕ್ರಿಯೆ ಆದ ಮೇಲೆ ಆದೇಶ ಹೊರಡಿಸಲಾಗುತ್ತದೆ:
- ಮಗುವಿಗೆ ಪಾಸ್ಪೋರ್ಟ್ ಮತ್ತು ವೀಸಾ ಸಿಕ್ಕಾಗ
- ನ್ಯಾಯಾಲಯದ ಆದೇಶ ಹೊರಡಿಸಿದಾಗ
ಹಂತ ೬: ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆಸಿ, ನೀವು ದತ್ತು ಸ್ವೀಕೃತಿ ಅರ್ಜಿ ಸಲ್ಲಿಸಿದ ೨ ತಿಂಗಳುಗಳ ಒಳಗೆ ವಿಲೇವಾರಿ ಮಾಡಲಾಗುತ್ತದೆ.
ಹಂತ ೭: ನೀವು ಭಾರತಕ್ಕೆ ಬಂದು, ದತ್ತು ಸ್ವೀಕೃತಿ ಆದೇಶ ಹೊರಡಿಸಿದ ೨ ತಿಂಗಳುಗಳೊಳಗೆ ಮಗುವನ್ನು ಕರೆದೊಯ್ಯಬೇಕು. ಅದಾದ ಮೇಲೆ, ಕೆಳಗಿನ ಪ್ರಕ್ರಿಯೆ ನಡೆಯುತ್ತದೆ:
- ನ್ಯಾಯಾಲಯದಿಂದ ಬಂದ ದತ್ತು ಸ್ವೀಕೃತಿ ಆದೇಶ ಸಿಕ್ಕು ೩ ಕೆಲಸದ ದಿನಗಳೊಳಗೆ ಸಮಂಜಸ ಅಧಿಕಾರಿಗಳಿಂದ ಅನುಸರಣೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
- ಧೃಡಪಡಿಸಲಾದ ದತ್ತು ಸ್ವೀಕೃತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಲಸೆ ಅಧಿಕಾರಿಗಳಂತಹ ಬೇರೆ-ಬೇರೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುತ್ತಾರೆ.
- ಅಧಿಕಾರಿಗಳು ಮಗುವಿಗೆ ಭಾರತೀಯ ಪಾಸ್ಪೋರ್ಟ್, ಹುಟ್ಟು ಪ್ರಮಾಣಪತ್ರ, ಮತ್ತು ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಬೇಕಾದಲ್ಲಿ) ಸಿಗಲು ಸಹಾಯ ಮಾಡುತ್ತಾರೆ.
ಹಂತ ೮: ದತ್ತು ಸ್ವೀಕೃತಿಯ ಪ್ರಗತಿಯನ್ನು ನಿರ್ಣಯಿಸಲು ಸಂಬಂಧಪಟ್ಟ ಅಧಿಕಾರಿಗಳು, ಅರ್ಧ ವಾರ್ಷಿಕವಾಗಿ ದತ್ತು ಸ್ವೀಕೃತಿಯಾದ ಮೇಲೆ ೨ ವರ್ಷಗಳ ಕಾಲ ಅಧ್ಯಯನ ನಡೆಸುತ್ತಾರೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.