ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.
ಭಾರತೀಯ ಕಾನೂನಿನ ಪ್ರಕಾರ ವೈವಾಹಿಕ ಅತ್ಯಾಚಾರವು ಅಪರಾಧವಲ್ಲ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ ವಯಸ್ಕ) ಹೆಂಡತಿಯ ಹೊರತು ಪಡಿಸಿ, ಆಕೆಯ ಒಪ್ಪಿಗೆಯಿಲ್ಲದೆ ತನ್ನ ಹೆಂಡತಿಯೊಂದಿಗೆ ಬಲವಂತದ ಲೈಂಗಿಕ ಸಂಭೋಗಕ್ಕಾಗಿ ಪತಿಯನ್ನು ಕಾನೂನು ಶಿಕ್ಷಿಸುವುದಿಲ್ಲ.9
ಆದ್ದರಿಂದ, ಪುರುಷನು ತನ್ನ ವಯಸ್ಕ ಹೆಂಡತಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರವಲ್ಲ. ಆದಾಗ್ಯೂ, ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಇದು ಅನ್ವಯಿಸುವುದಿಲ್ಲ. ದಂಪತಿಗಳು ವಿವಾಹಿತರಾಗಿದ್ದು, ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ನೀಡದಿದ್ದರೆ ಪತಿ ಅತ್ಯಾಚಾರದ ಅಪರಾಧಿ. ಈ ಪ್ರಕರಣದಲ್ಲಿ ಪತಿಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಜೊತೆಗೆ ದಂಡ ವಿಧಿಸಬಹುದು.10
ಆದ್ದರಿಂದ, ಪುರುಷನು ತನ್ನ ವಯಸ್ಕ ಹೆಂಡತಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ಅತ್ಯಾಚಾರವಲ್ಲ. ಆದಾಗ್ಯೂ, ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಇದು ಅನ್ವಯಿಸುವುದಿಲ್ಲ. ದಂಪತಿಗಳು ವಿವಾಹಿತರಾಗಿದ್ದರೆ, ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ನೀಡದಿದ್ದರೆ ಪತಿ ಅತ್ಯಾಚಾರದ ಅಪರಾಧಿ. ಈ ಪ್ರಕರಣದಲ್ಲಿ ಪತಿಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಜೊತೆಗೆ ದಂಡ.10
ಕಾನೂನು ವೈವಾಹಿಕ ಅತ್ಯಾಚಾರವನ್ನು ಶಿಕ್ಷಿಸದಿದ್ದರೂ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾಕಾಯಿದೆ, 2005 ರ ಅಡಿಯಲ್ಲಿ ಮಹಿಳೆಯು ಪರಿಹಾರವನ್ನು ಪಡೆಯಬಹುದು. ಈ ಕಾನೂನು ಮಹಿಳೆಯ ಘನತೆಗೆ ಧಕ್ಕೆತರುವ, ಅವಮಾನಿಸುವ, ಕುಗ್ಗಿಸುವ ಅಥವಾ ಉಲ್ಲಂಘಿಸುವ ಲೈಂಗಿಕ ಸ್ವರೂಪದ ಯಾವುದೇ ನಡವಳಿಕೆಯನ್ನು ಒಳಗೊಂಡ ಲೈಂಗಿಕ ದೌರ್ಜನ್ಯವನ್ನು ಅಪರಾಧವೆಂದು ಹೇಳುತ್ತದೆ.11 ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯ ಹಕ್ಕುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.
ವೈವಾಹಿಕ ಅತ್ಯಾಚಾರಕ್ಕೆ ಆಸರೆ.. | ಹೆಂಡತಿ ಅಪ್ರಾಪ್ತ ವಯಸ್ಕಳಾಗಿದ್ದರೆ
————————- ದಂಪತಿಗಳು ಬೇರ್ಪಟ್ಟರೆ ————————- ಕೌಟುಂಬಿಕ ಹಿಂಸೆ ಕಾನೂನಿನ ಅಡಿಯಲ್ಲಿ |
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
20 ವರ್ಷ ಶಿಕ್ಷೆ ಇಂದ ಜೀವಾವಧಿ + ದಂಡ —————————- ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ 2 ರಿಂದ 7 ವರ್ಷಗಳು + ದಂಡ —————————- ಲೈಂಗಿಕ ದೌರ್ಜನ್ಯವನ್ನು ಒಳಗೊಳ್ಳುತ್ತದೆ |