ವೈದ್ಯಕೀಯ ಸೇವೆಗಾಗಿ ಬೇಡಿಕೆ

ಕೊನೆಯ ಅಪ್ಡೇಟ್ Apr 30, 2025

ಸಂತ್ರಸ್ತರು ವೈದ್ಯಕೀಯ ಸಂಸ್ಥೆಗಳಿಂದ (ಸಾರ್ವಜನಿಕ ಮತ್ತು ಖಾಸಗಿ ಎರಡೂ) ತಕ್ಷಣದ ಮತ್ತು ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಸಂಸ್ಥೆಯು ಅಪರಾಧ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಬೇಕು.20 ಸಂಸ್ಥೆಯು ಚಿಕಿತ್ಸೆ ನೀಡಲು ಮತ್ತು ಪೊಲೀಸರಿಗೆ ತಿಳಿಸಲು ನಿರಾಕರಿಸಿದರೆ, ಸಂಸ್ಥೆಯ ಮೇಲ್ವಿಚಾರಕರಿಗೆ  ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು/ಅಥವಾ  ದಂಡ ವಿಧಿಸಬಹುದು.21

ಕ್ರಿಮಿನಲ್ ಘಟನೆಯ ಬಗ್ಗೆ ಮಾಹಿತಿ ಪಡೆದ 24 ಗಂಟೆಗಳ ಒಳಗೆ, ಸಂತ್ರಸ್ತರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಅಧಿಕೃತ ವೈದ್ಯರ ಬಳಿಗೆ ಕಳುಹಿಸುತ್ತಾರೆ. ವೈದ್ಯಕೀಯ ಪರೀಕ್ಷೆಯು ಸಂತ್ರಸ್ತರ ಒಪ್ಪಿಗೆಯೊಂದಿಗೆ ಅಥವಾ ಅವಳ ಪರವಾಗಿ ಒಪ್ಪಿಗೆ ನೀಡುವ ಯಾರೊಬ್ಬರ ಒಪ್ಪಿಗೆಯೊಂದಿಗೆ ಮಾತ್ರ ನಡೆಸಬಹುದು. ಒಪ್ಪಿಗೆಯನ್ನು ಪಡೆದ ನಂತರ, ವೈದ್ಯರು ತಕ್ಷಣವ ಸಂತ್ರಸ್ತರನ್ನು   ಪರೀಕ್ಷಿಸುತ್ತಾರೆ ಮತ್ತು ಸಂತ್ರಸ್ತರ ಗಾಯಗಳು, ಮಾನಸಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುತ್ತಾರೆ.23 ವರದಿಯಲ್ಲಿ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ದಾಖಲಿಸಲಾಗುತ್ತದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪ್ರಾರಂಭಿಸಿದ ಮತ್ತು ಪೂರ್ಣಗೊಳಿಸಿದ ನಿಖರವಾದ ಸಮಯವನ್ನು ನಮೂದಿಸಲಾಗುತ್ತದೆ.24 ನೋಂದಾಯಿತ ವೈದ್ಯರು ಏಳು ದಿನಗಳ ಅವಧಿಯೊಳಗೆ ವರದಿಯನ್ನು ತನಿಖಾಧಿಕಾರಿಗೆ ರವಾನಿಸಬೇಕು ಮತ್ತು ಅವರು ಅದನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ರವಾನಿಸಬೇಕು.25

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.