ಉಯಿಲು ಮಾನ್ಯವಾಗಲು:
ಇದು ನಿಮ್ಮ ಸಹಿಯನ್ನು ಹೊಂದಿರಬೇಕು (ಅಥವಾ ನಿಮ್ಮ ಹೆಬ್ಬೆರಳಿನ ಗುರುತು).
ಸಹಿ/ಬೆರಳಚ್ಚುಗಳನ್ನು ಇತರ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಮಾಡಬೇಕು.
ಇಬ್ಬರೂ ಸಾಕ್ಷಿಗಳು ಉಯಿಲಿಗೆ ಸಹಿ ಹಾಕುತ್ತಾರೆ ಅಥವಾ ನಿಮ್ಮ ಉಪಸ್ಥಿತಿಯಲ್ಲಿ ಅವರ ಬೆರಳಚ್ಚುಗಳನ್ನು ಹಾಕುತ್ತಾರೆ.
ನಿಮ್ಮ ಉಪಸ್ಥಿತಿಯಲ್ಲಿ ನಿಮ್ಮ ಉಯಿಲಿಗೆ ಸಹಿ ಹಾಕಲು ನೀವು ಬೇರೆಯವರಿಗೆ ನಿರ್ದೇಶಿಸಬಹುದು. ಈ ಸಹಿ ಮಾಡಲು ಯಾವುದೇ ನಿಗದಿತ ಸ್ವರೂಪ ಅಥವಾ ನಿಗದಿತ ಸ್ಥಳವಿಲ್ಲ. ನಿಮ್ಮ ಉಯಿಲಿಗೆ ಯಾರಾದರೂ ಸಾಕ್ಷಿಯಾಗಬಹುದು – ಉಯಿಲಿನ ಕಾರ್ಯ ನಿರ್ವಾಹಕರೂ (ಎಕ್ಸಿಕ್ಯೂಟರ್) ಸೇರಿದಂತೆ.