ನಾನು ಉಯಿಲು ಮಾಡದೇ ಸತ್ತರೆ ಏನಾಗುತ್ತದೆ?
ನಿಮ್ಮ ಧರ್ಮವನ್ನು ಅವಲಂಬಿಸಿ, ನಿಮ್ಮ ಸಾವಿನ ನಂತರ ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಭಿನ್ನ ನಿಯಮಗಳಿವೆ. ಆದಾಗ್ಯೂ, ನೀವು ಉಯಿಲು ಮಾಡಿದರೆ, ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ನೀವು ಆಯ್ಕೆ ಮಾಡುವ ಜನರ ನಡುವೆ ಹಂಚಲಾಗುತ್ತದೆ ಮತ್ತು ನಿರ್ದಿಷ್ಟ ಧಾರ್ಮಿಕ ನಿಯಮಗಳು ಸಾಮಾನ್ಯವಾಗಿ ಅನ್ವಯಿಸುವುದಿಲ್ಲ. ಹಿಂದೂ ವ್ಯಕ್ತಿಯಾಗಿ, ಹಿಂದೂ ಉತ್ತರಾಧಿಕಾರ ಕಾಯಿದೆ, 1956 ಎಂದು ಕರೆಯಲ್ಪಡುವ ಕಾನೂನಿನ ಅಡಿಯಲ್ಲಿ ಉತ್ತರಾಧಿಕಾರದ ನಿಯಮಗಳು ಅನ್ವಯಿಸುತ್ತವೆ. ಅದೇ ರೀತಿ ಮುಸ್ಲಿಮರ ಉತ್ತರಾಧಿಕಾರಕ್ಕೆ ಅನ್ವಯವಾಗುವ ನಿಯಮಗಳು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇರುತ್ತದೆ (ನೀವು ನಾಗರಿಕ ವಿವಾಹಗಳ ಕಾನೂನಿನ ಅಡಿಯಲ್ಲಿ ಮದುವೆಯಾಗಿರದಿದ್ದರೆ). ಮುಸ್ಲಿಂ ವೈಯಕ್ತಿಕ ಕಾನೂನು ಅನ್ವಯವಾದರೆ, ನಿಮ್ಮ ಸಂಪೂರ್ಣ ಆಸ್ತಿಯನ್ನು ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಲ್ಲದ ವ್ಯಕ್ತಿಗಳಿಗೆ ವಿತರಿಸಲಾಗುವುದಿಲ್ಲ. ನಿಮ್ಮ ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ನೀವು ಬೇರೆಯವರಿಗೆ ಬಿಟ್ಟುಕೊಡಬಹುದು ಮತ್ತು ಉಳಿದ ಮೂರನೇ ಎರಡರಷ್ಟು ಭಾಗವನ್ನು ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವಿತರಿಸಬೇಕು.