ನಿಮ್ಮ ಹೆಸರನ್ನು ಬದಲಾಯಿಸವ ಕ್ರಮಗಳು ಯಾವುವು?

ಕೊನೆಯ ಅಪ್ಡೇಟ್ Jan 7, 2026

ನಿಮ್ಮ ಹೆಸರನ್ನು ಬದಲಾಯಿಸಲು, ಸೇರ್ಪಡೆ ಮಾಡಲು ಅಥವಾ ನಿಮ್ಮ ಹೆಸರಿನ ಭಾಗವನ್ನು ಅಳಿಸಲು, ನೀವು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬೇಕು ಮತ್ತು ಅದನ್ನು ರಾಜ್ಯ ಅಥವಾ ಕೇಂದ್ರ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ವಿದೇಶದಲ್ಲಿ ಯಾವುದೇ ಉನ್ನತ ವ್ಯಾಸಂಗ, ವೀಸಾ ಅರ್ಜಿಗಳು, ಪಾಸ್‌ಪೋರ್ಟ್ ಅರ್ಜಿ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಅದನ್ನು ಸೆಂಟ್ರಲ್ ಗೆಜೆಟ್‌ನಲ್ಲಿ ಪ್ರಕಟಿಸಲು ನೀವು ಆಯ್ಕೆ ಮಾಡಬಹುದು. ನೀವು ಅದನ್ನು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲು ಆಯ್ಕೆ ಮಾಡಿದರೆ, ಅದನ್ನು ನಿಮ್ಮ ರಾಜ್ಯದಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ ಆದರೆ ನೀವು ಅನೇಕ ಗುರುತಿನ ದಾಖಲೆಗಳನ್ನು ನವೀಕರಿಸಲು/ಪಡೆಯಲು ಇದನ್ನು ಬಳಸಬಹುದು, ಶಾಲಾ ಪ್ರಮಾಣಪತ್ರಗಳಲ್ಲಿ ನಿಮ್ಮ ಹೆಸರನ್ನು ಬದಲಾಯಿಸಬಹುದು, ಇತ್ಯಾದಿ. ನಿಮ್ಮ ಹೆಸರನ್ನು ಬದಲಾಯಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಶಪಥ ಪತ್ರ / ವಹಿಸಿಕೊಳ್ಳುವ ಪತ್ರ  ಮಾಡಿಸಿ

 ನಿಮ್ಮ ಹೊಸ ಹೆಸರನ್ನು ನೀವು ಎಲ್ಲಿ ಪ್ರಕಟಿಸಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ಕೆಳಗೆ ನೀಡಲಾದ ದಾಖಲೆಗಳನ್ನು ನೀವು ಪ್ರಸ್ತುತ ಪಡಿಸಬೇಕು:

  • ಶಪಥ ಪತ್ರ  (ರಾಜ್ಯ ಮತ್ತು ಕೇಂದ್ರ ಗೆಜೆಟ್ ಎರಡಕ್ಕೂ)
  • ವಹಿಸಿಕೊಳ್ಳುವಿಕೆ (ಕೇಂದ್ರ ಗೆಜೆಟ್‌ಗಾಗಿ)

ಶಪಥ ಪತ್ರ /ವಹಿಸಿಕೊಳ್ಳುವಿಕೆ  ಎನ್ನುವುದು ನಿಮ್ಮ ಇಚ್ಛೆಯ ಹೊಸ ಹೆಸರು, ನೀವು ಗುರುತಿಸುವ ಲಿಂಗ, ವೈದ್ಯಕೀಯ ವಿಧಾನಗಳು ಇತ್ಯಾದಿಗಳಂತಹ ನೀವು ಬರೆದ ಸತ್ಯಗಳನ್ನು ಒಳಗೊಂಡಿರುವ ದಾಖಲೆಗಳಾಗಿವೆ. ಉದಾಹರಣೆಗೆ, ನಿಮ್ಮ ಹೆಸರನ್ನು ಬದಲಾಯಿಸುವಾಗ ಮಾತ್ರವಲ್ಲದೆ ನೀವು  ಆಧಾರ್ ಕಾರ್ಡ್ ಪಡೆಯುವಾಗ, ಬ್ಯಾಂಕ್ ಖಾತೆ ತೆರೆಯುವಾಗ, ಸಿಮ್ ಕಾರ್ಡ್ ಪಡೆಯುವಾಗ ಇತ್ಯಾದಿ ಸಂಧರ್ಭದಲ್ಲಿಯೂ ಕೂಡಾ ಶಪಥ ಪತ್ರ /ವಹಿಸಿಕೊಳ್ಳುವಿಕೆ ಬಳಸಬಹುದು. 

ಹಂತ 2: ನೋಟರಿ ಅಥವಾ ಒಥ್ ಕಮಿಷನರ್ ಬಳಿಗೆ ಹೋಗಿ

ನಿಮ್ಮ ಶಪಥ ಪತ್ರ /ವಹಿಸಿಕೊಳ್ಳುವಿಕೆ ಪರಿಶೀಲಿಸುವ ಹತ್ತಿರದ/ಸ್ಥಳೀಯ ನೋಟರಿ ಅಥವಾ ಓಥ್ ಕಮಿಷನರ್ ಅನ್ನು ಹುಡುಕಿ. ನಿಮ್ಮ ದಾಖಲೆಯನ್ನು ಸ್ಟ್ಯಾಂಪ್ ಮಾಡಲಾಗುತ್ತದೆ ನಂತರ ಅದು ಮಾನ್ಯವಾದ ಕಾನೂನು ದಾಖಲೆ ಆಗಿರುತ್ತದೆ. ಈ ಸೇವೆಗಾಗಿ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಂತ 3: ನಿಮ್ಮ ಹೊಸ ಹೆಸರನ್ನು ಪತ್ರಿಕೆಯಲ್ಲಿ ಜಾಹೀರಾತು ಮಾಡಿ

ನಿಮ್ಮ ರಾಜ್ಯದ ಎರಡು ಸ್ಥಳೀಯ ಪ್ರಮುಖ ಪತ್ರಿಕೆಗಳನ್ನು ನೀವು ಸಂಪರ್ಕಿಸಬೇಕು (ಒಂದು ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಮತ್ತು ಇನ್ನೊಂದು ಇಂಗ್ಲಿಷ್‌ನಲ್ಲಿ) ಮತ್ತು ಪರಿಶೀಲಿಸಿದ ಶಪಥ ಪತ್ರ ವನ್ನು ತೋರಿಸಿದ ನಂತರ ನಿಮ್ಮ ಹೊಸ ಹೆಸರನ್ನು ಪ್ರಕಟಿಸಲು ವಿನಂತಿಸಬೇಕು. ಜಾಹೀರಾತನ್ನು ಪ್ರಕಟಿಸಲು ನೀವು ಪತ್ರಿಕೆಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಂತ 4: ಇದನ್ನು ಕೇಂದ್ರ ಅಥವಾ ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿ

ನೀವು ನಿಮ್ಮ ಹೆಸರನ್ನು ರಾಜ್ಯ ಗೆಜೆಟ್‌ನಲ್ಲಿ (ನಿಮ್ಮ ರಾಜ್ಯದೊಳಗೆ) ಅಥವಾ ಕೇಂದ್ರ ಗೆಜೆಟ್‌ನಲ್ಲಿ (ರಾಷ್ಟ್ರೀಯ ಮಟ್ಟ) ಪ್ರಕಟಿಸಬೇಕಾಗುತ್ತದೆ.

ರಾಜ್ಯ ಗೆಜೆಟ್‌

ನೀವು ನಿಮ್ಮ ಆಯಾ ರಾಜ್ಯದ ಸರ್ಕಾರಿ ಮುದ್ರಣಾಲಯವನ್ನು ಸಂಪರ್ಕಿಸಬೇಕು, ಅವರು ನೀಡಿದ ಆಯಾ ಅರ್ಜಿಯನ್ನು ಭರ್ತಿಮಾಡಬೇಕು ಮತ್ತು ನಿಗದಿತ ಶುಲ್ಕವನ್ನು ಪಾವತಿಸಬೇಕು.

 ಕೇಂದ್ರ ಗೆಜೆಟ್

ಕೇಂದ್ರ ಗೆಜೆಟ್‌ನಲ್ಲಿ ನಿಮ್ಮ ಹೆಸರನ್ನು ಪ್ರಕಟಿಸಲು ನೀವು ಬಯಸಿದರೆ, ನೀವು ಅದನ್ನು ಈ ಕೆಳಗಿನ ವಿಳಾಸಕ್ಕೆ “ಪ್ರಕಟಣೆಗಳ ಇಲಾಖೆ, ಸಿವಿಲ್ ಲೈನ್ಸ್, ನವದೆಹಲಿ-54” ವಿಳಾಸಕ್ಕೆ ಕಳುಹಿಸಬೇಕು:

  • ನಿಮ್ಮ ಪರಿಶೀಲಿಸಿದ ಶಪಥ ಪತ್ರ ಮತ್ತು ವಹಿಸಿಕೊಳ್ಳುವಿಕೆ 
  • ಮೂಲ ಪತ್ರಿಕೆಯ ಜಾಹೀರಾತು ತುಣುಕು.
  • ಸ್ವಯಂ ದೃಢೀಕರಿಸಿದ ID ಪುರಾವೆ ಮತ್ತು 2 ಸ್ವಯಂ ದೃಢೀಕರಿಸಿದ ಪಾಸ್‌ಪೋರ್ಟ್ ಫೋಟೋಗಳು.
  •  ನಿಮ್ಮ ಮತ್ತು 2 ಸಾಕ್ಷಿಗಳ ಸಹಿಯೊಂದಿಗೆ ಪ್ರೋಫಾರ್ಮಾದ ಪ್ರತಿ.
  • ನಿಮ್ಮ ಟೈಪ್ ಮಾಡಿದ ಹೆಸರಿನೊಂದಿಗೆ ಪ್ರೊಫಾರ್ಮಾದ CD ನಕಲು (ಸಾಕ್ಷಿಗಳು ಮತ್ತು ಸಹಿಗಳನ್ನು ಹೊರತುಪಡಿಸಿ).
  • ಹಾರ್ಡ್ ಕಾಪಿ ಮತ್ತು ಸಾಫ್ಟ್ ಕಾಪಿಯ ವಿಷಯಗಳು ಒಂದೇ ಆಗಿವೆ ಎಂದು ನೀವು ಸಹಿ ಮಾಡಿದ ಪ್ರಮಾಣಪತ್ರ.
  • ಶುಲ್ಕದೊಂದಿಗೆ ವಿನಂತಿ ಪತ್ರ

ಹಂತ 5: ಹೆಸರು ಬದಲಾವಣೆಯ ಪುರಾವೆ

ಕೇಂದ್ರ ಮತ್ತು ರಾಜ್ಯ ಪತ್ರಗಳೆರಡೂ ಹೆಸರುಗಳನ್ನು ಪ್ರಕಟಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಸಂಬಂಧಿತ ರಾಜ್ಯ ಗೆಜೆಟ್ ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರನ್ನು ನೀವು ಹುಡುಕಬೇಕು. ಕೇಂದ್ರ ಗೆಜೆಟ್‌ಗಾಗಿ, ಈ ಹಂತಗಳನ್ನು ಅನುಸರಿಸಿ:

  • ‘ವಾರದ ಗೆಜೆಟ್’ ವರ್ಗವನ್ನು ಸೇರಿಸಿ ಮತ್ತು ಹುಡುಕಾಟವನ್ನು ಒತ್ತಿರಿ.
  •  ‘ಭಾಗ IV’ ಆಯ್ಕೆಮಾಡಿ
  •  ದಿನಾಂಕಗಳನ್ನು ಸೇರಿಸಿ
  • “ಕೀವರ್ಡ್” ವಿಭಾಗದಲ್ಲಿ, ನಿಮ್ಮ ಹೊಸ ಹೆಸರನ್ನು ಸೇರಿಸಿ.
  • ರಚಿಸಿದ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ಮತ್ತು
  • ಸಂಬಂಧಿತ ಫೈಲ್ ಅನ್ನು ಡೌನ್‌ಲೋಡ್ ಮಾಡಿ. ಈ ಡೌನ್‌ಲೋಡ್ ಮಾಡಿದ ಪ್ರತಿಯನ್ನು ಪುರಾವೆಯಾಗಿ ಬಳಸಬಹುದು.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.