ಧೂಮಪಾನ ಕೊಠಡಿಗಳು

ಕೊನೆಯ ಅಪ್ಡೇಟ್ Nov 12, 2025

ಕಾನೂನಿನ ಅಡಿಯಲ್ಲಿ, ವಿಮಾನ ನಿಲ್ದಾಣಗಳು, ಕೆಲಸದ ಸ್ಥಳಗಳು, ಇತ್ಯಾದಿಗಳಂತಹ ಕೆಲವು ಸಾರ್ವಜನಿಕ ಸ್ಥಳಗಳು ತಮ್ಮ ಆವರಣದಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಧೂಮಪಾನ ಮಾಡಲು ಕೊಠಡಿಯನ್ನು ಹೊಂದಿರಬಹುದು. ಈ ಧೂಮಪಾನ ಕೊಠಡಿಗಳು ಈ ಕೆಳಗಿನ ನಿಯಮಾವಳಿಗಳಿಗೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು 24:

ಕೊಠಡಿಯು ಭೌತಿಕವಾಗಿ ಪ್ರತ್ಯೇಕವಾಗಿದೆ ಮತ್ತು ಎಲ್ಲಾ ನಾಲ್ಕು ಬದಿಗಳಲ್ಲಿ ಗೋಡೆಗಳನ್ನು ಹೊಂದಿದೆ
ಪ್ರವೇಶದ್ವಾರವು ಸ್ವಯಂಚಾಲಿತವಾಗಿ ಮುಚ್ಚುವ ಬಾಗಿಲನ್ನು ಹೊಂದಿದೆ
ಕಟ್ಟಡದ ಉಳಿದ ಭಾಗಗಳಿಗೆ ಹೋಲಿಸಿದರೆ ನಕಾರಾತ್ಮಕ ಗಾಳಿಯ ಒತ್ತಡವನ್ನು ಹೊಂದಿದೆ (ಇತರ ಕೋಣೆಗಳಿಗೆ ಮಾಲಿನ್ಯ ಹರಡದಂತೆ ತಡೆಗಟ್ಟಲು ಸಾಮಾನ್ಯವಾಗಿ ಬಳಸುವ ತಂತ್ರ)
ಗಾಳಿಯ ಹರಿವಿನ ವ್ಯವಸ್ಥೆಯನ್ನು ಹೊಂದಿ, ಇದು ಗಾಳಿಯನ್ನು ಹೊರಗೆ ಹರಿಯುವಂತೆ ಮಾಡಬೇಕು ಮತ್ತು ಕಟ್ಟಡದ ಇತರ ಭಾಗಗಳೊಂದಿಗೆ ಬೆರೆಯಬಾರದು, ಇವು ಇತರ ನಿಯಮಾವಳಿಗಳು 25.
ಕನಿಷ್ಠ 60 cm × 30 cm ಪ್ರವೇಶದ್ವಾರದಲ್ಲಿ “ತಂಬಾಕು ಸೇವನೆಯು ನಿಮ್ಮ ಆರೋಗ್ಯಕ್ಕೆ ಮತ್ತು ಧೂಮಪಾನಿಗಳಲ್ಲದವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ” ಮತ್ತು ” ಹದಿನೆಂಟು ವರ್ಷ ಕೆಳಗಿನ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ26 ” ಎಂಬ
ಒಂದು ಫಲಕವನ್ನು (ಇಂಗ್ಲಿಷ್ ಮತ್ತು ಒಂದು ಭಾರತೀಯ ಭಾಷೆಯಲ್ಲಿ) ಪ್ರದರ್ಶಿಸಬೇಕು.
ಹೆಚ್ಚಿನದಾಗಿ, ಸ್ಥಾಪನೆಯ ಪ್ರಕಾರವನ್ನು ಅವಲಂಬಿಸಿ, ಧೂಮಪಾನದ ಪ್ರದೇಶಕ್ಕೆ ಹೆಚ್ಚಿನ ನಿಯಮಗಳನ್ನು ಅನ್ವಯಿಸಬಹುದು. ಉದಾಹರಣೆಗೆ 27 , ಕನಿಷ್ಠ 30 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ವಿಮಾನ ನಿಲ್ದಾಣಗಳು ಮತ್ತು ರೆಸ್ಟೋರೆಂಟ್‌ಗಳಿಗೆ, ಧೂಮಪಾನದ ಕೊಠಡಿ ಪ್ರವೇಶ ಅಥವಾ ನಿರ್ಗಮನದಲ್ಲಿ ಇರುವಂತಿಲ್ಲ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.