ಅತ್ಯಾಚಾರ ವಿಚಾರಣೆ

ಕೊನೆಯ ಅಪ್ಡೇಟ್ Apr 30, 2025

ಅತ್ಯಾಚಾರದ ಅಪರಾಧದ ತನಿಕೆ ಮತ್ತು ವಿಚಾರಣೆಯನ್ನು ಇನ್-ಕ್ಯಾಮರಾ ಪ್ರಕ್ರಿಯೆಯ ಮೂಲಕ  ನಡೆಸಲಾಗುತ್ತದೆ ಅಂದರೆ ಅದು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಆದಾಗ್ಯೂ, ಒಬ್ಬ ವ್ಯಕ್ತಿಯು ನ್ಯಾಯಾಲಯದ ವಿಚಾರಣೆಯನ್ನು ವೀಕ್ಷಿಸಲು ಪ್ರಕರಣದ ಭಾಗಿದಾರ ವ್ಯಕ್ತಿಯೊಬ್ಬರು ಅರ್ಜಿಯನ್ನು ಸಲ್ಲಿಸಿದರೆ ನ್ಯಾಯಾಧೀಶರು ಅದನ್ನು ಅನುಮತಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ, ಮಹಿಳಾ ನ್ಯಾಯಾಧೀಶರಿಂದ ವಿಚಾರಣೆಯನ್ನು ನಡೆಸಲಾಗುತ್ತದೆ.29

 

ಅತ್ಯಾಚಾರದ ಕೆಲವು ಪ್ರಕರಣಗಳಲ್ಲಿ, ಲೈಂಗಿಕ ಸಂಭೋಗ ಸಾಬೀತಾದರೆ ಮತ್ತು ಸಂತ್ರಸ್ತರು ತಾನು ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದರೆ, ಸಂತ್ರಸ್ತರು ಒಪ್ಪಿಗೆ ನೀಡಲಿಲ್ಲ ಎಂದು ನ್ಯಾಯಾಲಯವು ಕಾನೂನುಬದ್ಧವಾಗಿ ಭಾವಿಸುತ್ತದೆ.30 ನಂತರ, ಸಂತ್ರಸ್ತರು ನಿಜವಾಗಿ ಒಪ್ಪಿಗೆ ನೀಡಿದ್ದರು  ಮತ್ತು ಲೈಂಗಿಕ ಸಂಭೋಗವು ಸಮ್ಮತಿಯಿಂದ ಕೂಡಿದೆಯೇ ಹೊರತು ಅತ್ಯಾಚಾರದ ಸ್ವರೂಪದ್ದಲ್ಲ ಎಂದು ಸಾಬೀತುಪಡಿಸುವುದು ಆರೋಪಿಯ ವಕೀಲರಿಗೆ ಬಿಟ್ಟದ್ದು.

 

ಆರೋಪಪಟ್ಟಿ ಸಲ್ಲಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳುತ್ತದೆ.31

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.