ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಹೆಸರು ಅಥವಾ ಯಾವುದೇ ವಿಷಯವನ್ನು ಮುದ್ರಿಸಲು ಅಥವಾ ಪ್ರಕಟಿಸಲು ಯಾರಿಗೂ ಅನುಮತಿ ಇಲ್ಲ. ಹಾಗೆ ಮಾಡಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.26 ನ್ಯಾಯಾಲಯದಿಂದ ಅನುಮತಿ ಪಡೆಯದೆ, ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣದ ಕುರಿತು ಯಾವುದೇ ವಿಷಯವನ್ನು ಮುದ್ರಿಸಿದರೆ ಅಥವಾ ಪ್ರಕಟಿಸಿದರೆ, ಅವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.27
ಸಂತ್ರಸ್ತರ ಗುರುತನ್ನು ಈ ಸಂಧರ್ಬಗಳಲ್ಲಿ ಮಾತ್ರ ಬಹಿರಂಗಪಡಿಸಬಹುದು:28
- ತನಿಖೆಯ ಉದ್ದೇಶಗಳಿಗಾಗಿ – ಈ ಸಂದರ್ಭದಲ್ಲಿ, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಥವಾ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿ ಮಾತ್ರ ಗುರುತನ್ನು ಬಹಿರಂಗಪಡಿಸಬಹುದು.
- ಸಂತ್ರಸ್ತರಿಂದ, ಅಥವಾ ಅವಳ ಲಿಖಿತ ಅನುಮತಿಯೊಂದಿಗೆ.
- ಸಂತ್ರಸ್ತರ ನಿಕಟವರ್ತಿಗಳಿಂದ, ಅಥವಾ ಅವರ ಅನುಮತಿಯೊಂದಿಗೆ – ಮಹಿಳೆ ಮರಣ ಹೊಂದಿದ್ದರೆ, ಅಥವಾ ಅಪ್ರಾಪ್ತರಾಗಿದ್ದರೆ ಅಥವಾ ಅಸ್ವಸ್ಥ ಮನಸ್ಸಿನವರಾಗಿದ್ದರೆ, ಇದನ್ನು ಅನುಮತಿಸಲಾಗುತ್ತದೆ. ಈ ಸಂದರ್ಭದಲ್ಲಿ, ಕುಟುಂಬವು ಯಾವುದೇ ಮಾನ್ಯತೆ ಪಡೆದ ಕಲ್ಯಾಣ ಸಂಸ್ಥೆ ಅಥವಾ ಸಂಸ್ಥೆಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ಮಾತ್ರ ಅಂತಹ ಅನುಮತಿಯನ್ನು ನೀಡಬಹುದು.