ಸಮ್ಮತಿಯು ಒಂದು ನಿರ್ದಿಷ್ಟ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವ ವ್ಯಕ್ತಿಯಿಂದ ಸ್ವಯಿಚ್ಛೆಯಿಂದ, ಗೊಂದಲಾರ್ಥಗಳಿಲ್ಲದ ಮತ್ತು ಸ್ಪಷ್ಟವಾದ ಒಪ್ಪಂದವಾಗಿದೆ. ಒಬ್ಬ ಮಹಿಳೆ ತಾನು ಯಾವುದಕ್ಕೆ ಸಮ್ಮತಿ ನೀಡುತ್ತಿದ್ದಾಳೆ ಮತ್ತು ಸಮ್ಮತಿಸಿದ ಕ್ರುತ್ಯದಿಂದಾಗುವ ಪರಿಣಾಮವನ್ನ ಅರಿತಿರಬೇಕು. ಅವಳು ದೈಹಿಕವಾಗಿ ಸಂಭೋಗ ಕ್ರಿಯೆಯನ್ನು ವಿರೋಧಿಸದಿದ್ದರೂ ಸಹ, ಅವಳು ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ಸೂಚಿಸಿದ್ದಾಳೆ ಎಂದು ಅರ್ಥವಲ್ಲ.
ಕೆಳಗಿನ ಸಂದರ್ಭಗಳಲ್ಲಿ, ಮಹಿಳೆ ತನ್ನ ಒಪ್ಪಿಗೆಯನ್ನು ನೀಡಿದ್ದರೂ ಸಹ ಪುರುಷನು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತದೆ1:
- ಅವಳನ್ನು ಹಿಂಸಿಸುವುದಾಗಿ ಬೆದರಿಕೆಯೊಡ್ಡಿ ಅಥವಾ ಅವಳ ಜೀವಕ್ಕೆ ಬೆದರಿಕೆಯೊಡ್ಡಿ ಅಥವಾ ಅವಳ ಆತ್ಮೀಯರ ಪ್ರಾಣಕ್ಕೆ ಬೆದರಿಕೆಯೊಡ್ಡಿ ಬಲವಂತವಾಗಿ ಅವಳ ಒಪ್ಪಿಗೆಯನ್ನು ಪಡೆದಿದ್ದರೆ
- ಪುರುಷನು ತಾನು ಆ ಮಹಿಳೆಯ ಪತಿ ಅಲ್ಲ ಎಂದು ತಿಳಿದಿದ್ದು ಮತ್ತು ಅವಳು ಆ ಪುರುಷನನ್ನು ತನ್ನ ಪತಿ ಎಂದು ಭಾವಿಸಿಕೊಂಡ ಮಾತ್ರಕ್ಕೆ ಅವಳ ಒಪ್ಪಿಗೆ ನೀಡಿದ್ದರೆ
- ಮನಸ್ಸಿನ ಅಸ್ವಸ್ಥತೆ ಅಥವಾ ಅಮಲು ಅಥವಾ ಪುರುಷನು ತನಗೆ ಹಾನಿಕಾರಕ ಪದಾರ್ಥವನ್ನು ನೀಡಿದ್ದರಿಂದ ಮಹಿಳೆಯು ತಾನು ಒಪ್ಪಿಗೆ ನೀಡುವ ಕ್ರಿಯೆಯ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ
- ಮಹಿಳೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ.
ಸಮ್ಮತಿ ಎಂದರೆ, | ಸ್ವಯಿಚ್ಛೆಯಿಂದ
————————- ಸ್ಪಷ್ಟವಾದ ————————- ಗೊಂದಲಾರ್ಥಗಳಿಲ್ಲದ |
ಬಲವಂತವಿಲ್ಲದ
ಬೆದರಿಕೆಯಿಂದಲ್ಲದ ಪ್ರಜ್ಞಾಹೀನ ಸ್ಥಿತಿಯಲ್ಲಿರದ —————————- ಹೌದು ಎಂದರೆ ಹೌದು ಇಲ್ಲಾ ಎಂದರೆ ಇಲ್ಲಾ —————————- ಮದ್ಯ ಸೇವನೆ ಅಥವಾ ಇತರೇ ನಶೆಯಲ್ಲಿರದ ಕೇಳಿಸದಂತೆ ಇರದ |