ಉಯಿಲನ್ನು ನೋಂದಾಯಿಸುವುದು ಕಡ್ಡಾಯವಲ್ಲ. ನೀವು ಉಯಿಲನ್ನು ನೋಂದಾಯಿಸಲು ನಿರ್ಧರಿಸಿದಲ್ಲಿ, ನೀವು ವೈಯಕ್ತಿಕವಾಗಿ ಅಥವಾ ಅಧಿಕೃತ ಏಜೆಂಟ್ ಮೂಲಕ ಇದನ್ನು ಮಾಡಬಹುದು. ಸ್ಥಳೀಯ ವಿಭಾಗದ ಉಪ- ಅಶೂರೆನ್ಸ್ ರಿಜಿಸ್ಟ್ರಾರ್‌ಗೆ ನೋಂದಣಿ ಮಾಡಿಸಬೇಕಾದ ಉಯಿಲು ದಾಖಲಾತಿಯ ಸ್ವರೂಪದ ವಿವರಗಳ ಸಹಿತ ನಿಮ್ಮ ಮತ್ತು ನಿಮ್ಮ ಏಜೆಂಟರ (ಯಾರಾದರೂ ಇದ್ದರೆ) ಹೆಸರಿನೊಂದಿಗೆ ನೀವು ಮೊಹರು ಮಾಡಿದ ಲಕೋಟೆಯಲ್ಲಿ ಉಯಿಲನ್ನು ಕೊಡಬಹುದು. ರಿಜಿಸ್ಟ್ರಾರ್ ಲಕೋಟೆಯನ್ನು ಸ್ವೀಕರಿಸಿದ ನಂತರ ಮತ್ತು ಒಪ್ಪಿದ ನಂತರ, ಅವರು ಉಯಿಲು ಇರುವ ಮುಚ್ಚಿದ ಲಕೋಟೆಯನ್ನು ಅವರ ವಶದಲ್ಲಿ ಇಟ್ಟುಕೊಳ್ಳುತ್ತಾರೆ.
ಸಾಮಾನ್ಯವಾಗಿ, ನೀವು ಉಯಿಲುಗಳ ಮೇಲೆ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದಾಗ್ಯೂ, ನೀವು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿರುವ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಾರ್ಯವಿಧಾನಗಳು ಸಹ ವಿಭಿನ್ನವಾಗಿರಬಹುದು.
ನೀವು ಉಯಿಲನ್ನು ಮರುಪಡೆಯಲು ಬಯಸಿದರೆ (ಅದನ್ನು ಬದಲಾಯಿಸಲು ಅಥವಾ ಅದನ್ನು ಹಿಂತೆಗೆದುಕೊಳ್ಳಲು), ನೀವು ವೈಯಕ್ತಿಕವಾಗಿ ಅಥವಾ ಸರಿಯಾದ ಅಧಿಕೃತ ಏಜೆಂಟ್ ಮೂಲಕ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ನೀವು ಅಥವಾ ನಿಮ್ಮ ಏಜೆಂಟ್ ಸಲ್ಲಿಸಿದ ಅರ್ಜಿ ಒಪ್ಪತಕ್ಕದ್ದು ಎಂದು ರಿಜಿಸ್ಟ್ರಾರ್‌ಗೆ ತೃಪ್ತಿ ಇದ್ದರೆ, ಅವರು ಅದನ್ನು ಹಿಂದಿರುಗಿಸುತ್ತಾರೆ. ನಿಮ್ಮ ಮರಣದ ನಂತರ, ಉಯಿಲನ್ನು ಪಡೆಯಲು ಅಥವಾ ಉಯಿಲಿನ ವಿಷಯಗಳನ್ನು ನೋಡಲು ಒಬ್ಬ ವ್ಯಕ್ತಿಯು ರಿಜಿಸ್ಟ್ರಾರ್‌ಗೆ ಅರ್ಜಿಯನ್ನು ಸಲ್ಲಿಸಬಹುದು.
ಕೋಡಿಸಿಲ್ ಮೂಲಕ ನೀವು ಉಯಿಲಿಗೆ ಬದಲಾವಣೆಗಳನ್ನು ಮಾಡಿದ್ದರೆ, ನೀವು ಅದನ್ನು ಅದೇ ರೀತಿಯಲ್ಲಿ ನೋಂದಾಯಿಸಿಕೊಳ್ಳಬೇಕು.