ನಿಮ್ಮ ಮರಣದ ನಂತರ ನಿಮ್ಮ ಉಯಿಲಿನಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವ ಕರ್ತವ್ಯವನ್ನು ನೀವು ಯಾರಿಗೆ ನೀಡುತ್ತೀರೋ, ಅವರನ್ನು ಉಯಿಲಿನ ಕಾರ್ಯ ನಿರ್ವಾಹಕರು ಎಂದು ಕರೆಯಲಾಗುತ್ತದೆ.
ನಿಮ್ಮ ಉಯಿಲಿನ ನಿರ್ವಾಹಕರಾಗಿ 18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಸ್ವಸ್ಥ ಮಾನಸಿಕ ಆರೋಗ್ಯ ಹೊಂದಿರುವ ಯಾವುದೇ ವ್ಯಕ್ತಿಯನ್ನು ನೀವು ನೇಮಿಸಬಹುದು. ನೀವು ಪೂರ್ಣ ವಿಶ್ವಾಸ ಹೊಂದಿರುವ ಮತ್ತು ಉಯಿಲಿನ ನಿರ್ವಾಹಕರಾಗಿ ಕಾರ್ಯನಿರ್ವಹಿಸಲು ಸಿದ್ಧರಿರುವ ಮತ್ತು ಸಮರ್ಥರಾಗಿರುವ ವ್ಯಕ್ತಿಯನ್ನು ನೀವು ಆರಿಸಬೇಕು.
ನಿಮ್ಮ ಉಯಿಲಿನಲ್ಲಿ ನೀವು ಕಾರ್ಯನಿರ್ವಾಹಕರನ್ನು ನೇಮಿಸದಿದ್ದರೆ, ನಿಮ್ಮ ಉಯಿಲನ್ನು ಕಾರ್ಯಗತಗೊಳಿಸುವ ನಿರ್ವಾಹಕರನ್ನು ನೇಮಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.