ನೀವು ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವ ನಿಮ್ಮ ಎಲ್ಲಾ ಆಸ್ತಿಯನ್ನು ನೀವು ಬಿಟ್ಟುಕೊಡಬಹುದು. ನೀವು ಹೊಂದಿರದ ಆಸ್ತಿಯನ್ನು ನೀವು ಬಿಟ್ಟುಕೊಡಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ನೀವು ಆಸ್ತಿಯಲ್ಲಿ ಜೀವಿತಾವಧಿಯ ಹಕ್ಕನ್ನು ಮಾತ್ರ ಹೊಂದಿರಬಹುದು, ಅಂದರೆ ನಿಮ್ಮ ಜೀವಿತಾವಧಿಯಲ್ಲಿ ಬಳಸಲು ಮಾತ್ರ ಯಾರಾದರೂ ತಮ್ಮ ಇಚ್ಚಾನುಸಾರ ಆಸ್ತಿಯನ್ನು ನಿಮಗೆ ನೀಡಿದಾಗ, ಅದು ನಿಮ್ಮ ಸೊತ್ತಾಗಿರುವುದಿಲ್ಲ .
ನೀವೇ ಸಂಪಾದಿಸಿರುವ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ನೀವು ಉಯಿಲಿಗೆ ಸೇರಿಸಿಕೊಳ್ಳಬಹುದು. ನೀವು ಹಿಂದೂ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದರೆ, ನಿಮ್ಮ ಪಾಲಿಗೆ ಬರುವ ನಿಮ್ಮ ಪೂರ್ವಜರ ಆಸ್ತಿಯ ಭಾಗವನ್ನು ಮಾತ್ರ ಉಯಿಲಿನಲ್ಲಿ ನೀಡಬಹುದು.