ನಿಮ್ಮ ಆಸ್ತಿಯನ್ನು ಯಾರಾದರೂ ಅತಿಕ್ರಮಿಸಿದರೆ ಅಥವಾ ಅಪ್ಪಣೆ ಇಲ್ಲದೆ ಪ್ರವೇಶಿಸಿದರೆ ಅಥವಾ ನಿರ್ಮಾಣವು ಗಡಿರೇಖೆಯನ್ನು ಮೀರಿ ವಿಸ್ತರಿಸಿದರೆ, ಅದನ್ನು ಪರಿಹರಿಸಲು ಮೂರು ಮಾರ್ಗಗಳಿವೆ.
ಅತಿಕ್ರಮಣ: ಯಾರಾದರೂ ನಿಮ್ಮ ಆಸ್ತಿಯನ್ನು ಪ್ರವೇಶಿಸಿದರೆ:,
- ಅಪರಾಧ ಮಾಡುವ ಉದ್ದೇಶದಿಂದ ಅಥವಾ ನಿಮ್ಮನ್ನು ಬೆದರಿಸುವ, ಅವಮಾನಿಸುವ ಅಥವಾ ಕಿರಿಕಿರಿಗೊಳಿಸುವ ಉದ್ದೇಶದಿಂದ, ಅಥವಾ
- ಕಾನೂನುಬದ್ಧವಾಗಿ ಪ್ರವೇಶಿಸಿದರು ಆದರೆ ಕಾನೂನುಬಾಹಿರವಾಗಿ ಅಲ್ಲೇ ಉಳಿಯುತ್ತಿದ್ದರೆ
ಇದು ಭಾರತೀಯ ದಂಡ ಸಂಹಿತೆ/ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಕ್ರಿಮಿನಲ್ ಅತಿಕ್ರಮಣ ವಾಗಬಹುದು((ಭಾರತೀಯ ದಂಡ ಸಂಹಿತೆಯ ಸೆಕ್ಷನ್ 441 ಮತ್ತು ಭಾರತೀಯ ನ್ಯಾಯ ಸಂಹಿತೆ, ಸೆಕ್ಷನ್ 329 ಕ್ರಿಮಿನಲ್ ಅತಿಕ್ರಮಣವನ್ನು ವ್ಯಾಖ್ಯಾನಿಸುತ್ತದೆ.)). ನೀವು ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬಹುದು.
ಆಸ್ತಿಯ ಗಡಿರೇಖೆ: ಗೋಡೆಗಳು ಅಥವಾ ಬೇಲಿಗಳನ್ನು ನಿರ್ಮಿಸುವ ಮೂಲಕ ಭೂಮಿಯನ್ನು ಗುರುತಿಸುವುದು ಎರಡನೆಯ ಆಯ್ಕೆಯಾಗಿದೆ. ಇದು ಭೂಮಿಯ ಗಡಿಗಳನ್ನು ನಿಗದಿಪಡಿಸುತ್ತದೆ, ಗುರುತಿಸಲಾದ ಭೂಮಿಯ ರಕ್ಷಣೆಗೆ ಭರವಸೆ ನೀಡುತ್ತದೆ ಮತ್ತು ಆಕ್ರಮಣಕಾರರನ್ನು ದೂರವಿಡುತ್ತದೆ.
ಆಸ್ತಿ ಅತಿಕ್ರಮಣಕ್ಕೆ ಸಿವಿಲ್ ಮೊಕದ್ದಮೆ: ಮೂರನೇ ಆಯ್ಕೆ , ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು ಮತ್ತು ಅತಿಕ್ರಮಣದ ವಿರುದ್ಧ ಆದೇಶಗಳನ್ನು ಪಡೆಯುವುದು. ನಿಮ್ಮ ಭೂ ಸ್ವಾಧೀನಕ್ಕೆ ಯಾರೂ ತೊಂದರೆ ಮಾಡದಂತೆ ಶಾಶ್ವತ ತಡೆಯಾಜ್ಞೆಯನ್ನು ನೀವು ಕೇಳಬಹುದು.