ಭೂಮಿ ಮತ್ತು ವಸತಿ ಮೌಲ್ಯಯುತವಾದ ಸ್ವತ್ತುಗಳು, ಮತ್ತು ಮಾಲೀಕರಾಗಿ, ನೀವು ಆಸ್ತಿಯನ್ನು ಮೇಲಾಧಾರವಾಗಿ ಬಳಸಿಕೊಂಡು ಬ್ಯಾಂಕ್ ಸಾಲವನ್ನು ಪಡೆಯಲು ಆಯ್ಕೆ ಮಾಡಬಹುದು. ಒಂದು ‘ಮೇಲಾಧಾರ’ ಒಂದು ಮೌಲ್ಯಯುತವಾದ ಆಸ್ತಿಯಾಗಿದ್ದು, ಸಾಲ ಪಡೆಯುವವರು ತಾವು ಸಾಲವನ್ನು ಪಡೆದುಕೊಳ್ಳಲು ಆಧಾರವಾಗಿ ನೀಡುತ್ತಾರೆ. ನೀವು ಹಣವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ನೀವು ಸಾಲದಾತನಿಗೆ ಮೇಲಾಧಾರವಾಗಿ ನೀಡಿರುವ ಆಸ್ತಿಯ ಮೇಲಿನ ಮಾಲೀಕತ್ವವನ್ನು ಕಳೆದುಕೊಳ್ಳಬಹುದು.
ಸಾಲದಾತರಿಗೆ, ಮೇಲಾಧಾರವು ಸುರಕ್ಷತಾ ನಿವ್ವಳವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕುಗಳಲ್ಲಿ ಸಾಲವನ್ನು (ವ್ಯಾಪಾರ, ಶಿಕ್ಷಣ ಇತ್ಯಾದಿ) ಹುಡುಕುವಾಗ, ವಿಶೇಷವಾಗಿ ಹೆಚ್ಚಿನ ಮೊತ್ತಕ್ಕಾಗಿ, ಬ್ಯಾಂಕುಗಳಿಗೆ ಭದ್ರತೆಗಾಗಿ ಕೆಲವು ಆಸ್ತಿಯನ್ನು ಮೇಲಾಧಾರವಾಗಿ ನೀಡವ ಅಗತ್ಯವಿರುತ್ತದೆ. ಈ ಉದ್ದೇಶಕ್ಕಾಗಿ, ನೀವು ಸ್ವಯಂ ವಾಸವಿರುವ ಮನೆ ಅಥವಾ ವಾಣಿಜ್ಯ ಆಸ್ತಿಯನ್ನು ನೀಡಬಹುದು. ಸಾಲಕ್ಕಾಗಿ ನೋಂದಾಯಿಸುವ ಸಮಯದಲ್ಲಿ ನೀವು ಮಾಲೀಕತ್ವದ ಪುರಾವೆಗಳನ್ನು ಹಕ್ಕು ಪತ್ರಗಳ ರೂಪದಲ್ಲಿ ಒದಗಿಸುವ ಅಗತ್ಯವಿದೆ. ಸಾಲಕ್ಕಾಗಿ ವಿನಂತಿಸಿದ ಮೊತ್ತಕ್ಕೆ ಮೇಲಾಧಾರವಾಗಿ ನೀಡಲಾಗುವ ಭೂಮಿ/ಮನೆಯ ವಿಶ್ವಾಸಾರ್ಹತೆ ಮತ್ತು ಮೌಲ್ಯವನ್ನು ಬ್ಯಾಂಕುಗಳು ನಿರ್ಧರಿಸುತ್ತವೆ. ಸಾಮಾನ್ಯವಾಗಿ, ಭೂಮಿ ಅಥವಾ ವಸತಿ ಆಸ್ತಿಯನ್ನು ಮೇಲಾಧಾರವಾಗಿ ಬಳಸುವಾಗ ಅನುಮೋದನೆಯ ಸಾಧ್ಯತೆಗಳು ಹೆಚ್ಚು.