ಪೋಲೀಸ್ ಸ್ಟೇಷನ್:
ಆನ್ ಲೈನ್ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಲ್ಲಿ, ನಿಮಗೆ ಎಫ್.ಐ.ಆರ್ ದಾಖಲಿಸುವಂತೆ ತಿಳಿಸಲಾಗುವುದು. ನಿಮಗಾದ ಆನ್ ಲೈನ್ ವಂಚನೆ ಕುರಿತು ಎಲ್ಲ ಮಾಹಿತಿಯನ್ನು ನೀವು ಈ ಸಂದರ್ಭದಲ್ಲಿ ಒದಗಿಸತಕ್ಕದ್ದು.
ಆನ್ ಲೈನ್ ದೂರು:
ಪೋಲೀಸ್ ಸ್ಟೇಷನ್ನ ಸೈಬರ್ ಕ್ರೈಂ ಶಾಖೆಯಲ್ಲಿ ಎಫ್.ಐ.ಆರ್ ದಾಖಲಿಸುವುದಲ್ಲದೆ, ನೀವು ಆನ್ ಲೈನ್ ನಲ್ಲೂ ಕೂಡ ಕೇಂದ್ರ ಗೃಹಖಾತೆಯ ಆನ್ ಲೈನ್ ಅಪರಾಧ ಮಾಹಿತಿ ಜಾಲತಾಣದಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ವಂಚನೆಯ ಘಟನೆ ಕುರಿತು ಸಂಪೂರ್ಣ ಮತ್ತು ವಿವರವಾದ ಮಾಹಿತಿಯನ್ನು ನೀಡುವುದರೊಡನೆ ದೂರನ್ನು ದಾಖಲಿಸಿರಿ. ಈ ವಂಚನೆಗೆ ಸಂಬಂಧಿಸಿದಂತೆ ನಿಮಗೆ ಬಂದ ಇ-ಮೇಲ್ ಅಥವಾ ಮೆಸೇಜುಗಳು ಸ್ಕ್ರೀನ್ ಷಾಟ್ ಗಳನ್ನು ಕೂಡ ನೀವು ಈ ಜಾಲತಾಣದಲ್ಲಿ ಅಪ್ ಲೋಡ್ ಮಾಡಬಹುದಾಗಿದೆ.