ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಕ್ರಿಶ್ಚಿಯನ್ ಮದುವೆಗಳಿಗೆ ಸಂಬಂದ್ಧಿಸಿದ್ದು, ಟ್ರಾವಂಕೋರ್-ಕೊಚಿನ್ ಮತ್ತು ಮಣಿಪುರ್ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಅನ್ವಯವಾಗುತ್ತದೆ.
- ಮಣಿಪುರದಲ್ಲಿ ಕ್ರಿಶ್ಚಿಯನ್ ಮದುವೆಗಳು ಸಾಂಪ್ರದಾಯಿಕ ನಿಯಮಗಳು ಮತ್ತು ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ನಡೆಯುತ್ತವೆ.
- ಟ್ರಾವಂಕೋರ್-ಕೊಚಿನ್ ಪ್ರಸ್ತುತದಲ್ಲಿ ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಭಾಗವಾಗಿದೆ. ಕೇರಳದ ಕೊಚಿನ್ ಪ್ರದೇಶದಲ್ಲಿ ಕ್ರಿಶ್ಚಿಯನ್ ಮದುವೆಗಳು ಕೊಚಿನ್ ಕ್ರಿಶ್ಚಿಯನ್ ನಾಗರಿಕ ವಿವಾಹ ಕಾಯಿದೆ, ೧೯೨೦ರ ಪ್ರಕಾರ ನಡೆಯುತ್ತವೆ. ಮಾಜಿ ರಾಜ್ಯದ ಟ್ರಾವಂಕೋರ್ ಪ್ರದೇಶ ಕೇರಳ ಹಾಗು ತಮಿಳು ನಾಡಿನ ದಕ್ಷಿಣ ಭಾಗದಲ್ಲಿ ವಿಸ್ತಾರಗೊಂಡಿದೆ. ಹೀಗಿರುವಾಗ, ತಮಿಳು ನಾಡು ಭಾರತೀಯ ಕ್ರಿಶ್ಚಿಯನ್ ವಿವಾಹ ಕಾನೂನನ್ನು ಅದರ ಟ್ರಾವಂಕೋರ್ ಭಾಗವನ್ನು ಸೇರಿಸಿ ಇಡೀ ರಾಜ್ಯಕ್ಕೆ ಅನ್ವಯಿಸಿದರೆ, ಕೇರಳ ಹಾಗೆ ಮಾಡಿಲ್ಲ. ಆದ್ದರಿಂದ ಕೇರಳದ ದಕ್ಷಿಣ ಭಾಗದಲ್ಲಿ (ಮಾಜಿ ಟ್ರಾವಂಕೋರ್) ಕ್ರಿಶ್ಚಿಯನ್ ಮದುವೆಗಳು ಬೇರೆ-ಬೇರೆ ಪಂಗಡಗಳ ಚರ್ಚುಗಳ ಆಂತರಿಕ ಕಾನೂನುಗಳನ್ನಾಧರಿಸಿ ನಡೆಯುತ್ತವೆ.