ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:
- ಮಕ್ಕಳ/ಉತ್ತರಾಧಿಕಾರಿಯ ಅಂತಸ್ತು ಅಥವಾ ಜೀವನದ ಗುಣಮಟ್ಟ
- ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
- ನೀವು ನಿಮ್ಮ ಮಕ್ಕಳು/ಉತ್ತರಾಧಿಕಾರಿಯಿಂದ ಬೇರೆಯಾಗಿ ವಾಸಿಸುತ್ತಿದ್ದೀರೋ ಹೇಗೆ
- ಮಕ್ಕಳ/ಉತ್ತರಾಧಿಕಾರಿಗಳ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
- ನಿಮ್ಮ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
- ಜೀವನಾಂಶ ಪಡೆಯಬೇಕಾದ ಒಟ್ಟು ವ್ಯಕ್ತಿಗಳು